Please enable javascript.ಸೋಶಿಯಲ್ ಮೀಡಿಯಾ ಮ್ಯಾನೇಜ್‌ಮೆಂಟ್ - ಸೋಶಿಯಲ್ ಮೀಡಿಯಾ ಮ್ಯಾನೇಜ್‌ಮೆಂಟ್ - Vijay Karnataka

ಸೋಶಿಯಲ್ ಮೀಡಿಯಾ ಮ್ಯಾನೇಜ್‌ಮೆಂಟ್

Vijaya Karnataka Web | 24 Jul 2013, 4:20 am
Subscribe

ಇಡೀ ಜಗತ್ತು ಒಂದಕ್ಕೊಂದು ಅವಲಂಬಿತವಾಗಿದೆ ಹಾಗೂ ನಿಕಟ ಸಂಪರ್ಕದಲ್ಲಿರುತ್ತದೆ ಎಂಬುದಂತೂ ನಿಜ. ಸೋಶಿಯಲ್ ಮೀಡಿಯಾ ಎಂಬುದೇ ಒಂದು ರೋಚಕ. ಸಾಕಷ್ಟು ಹೊಸ ಉದ್ಯೋಗಗಳು ಅದರಿಂದಾಗಿ ಸೃಷ್ಟಿಯಾಗುತ್ತಿವೆ. ಅದರಿಂದಾಗಿಯೇ ಸೋಶಿಯಲ್ ಮೀಡಿಯಾಗಳಿಗೆ ಬೇಡಿಕೆ ಹೆಚ್ಚಿದೆ.

ಸೋಶಿಯಲ್ ಮೀಡಿಯಾ ಮ್ಯಾನೇಜ್‌ಮೆಂಟ್
* ಶ್ರೀದೇವಿ ಅಂಬೆಕಲ್ಲು
ಇಡೀ ಜಗತ್ತು ಒಂದಕ್ಕೊಂದು ಅವಲಂಬಿತವಾಗಿದೆ ಹಾಗೂ ನಿಕಟ ಸಂಪರ್ಕದಲ್ಲಿರುತ್ತದೆ ಎಂಬುದಂತೂ ನಿಜ. ಸೋಶಿಯಲ್ ಮೀಡಿಯಾ ಎಂಬುದೇ ಒಂದು ರೋಚಕ. ಸಾಕಷ್ಟು ಹೊಸ ಉದ್ಯೋಗಗಳು ಅದರಿಂದಾಗಿ ಸೃಷ್ಟಿಯಾಗುತ್ತಿವೆ. ಅದರಿಂದಾಗಿಯೇ ಸೋಶಿಯಲ್ ಮೀಡಿಯಾಗಳಿಗೆ ಬೇಡಿಕೆ ಹೆಚ್ಚಿದೆ.

ಈಗಂತೂ ಹೆಚ್ಚಿನ ಯುವಕರು ಆನ್‌ಲೈನ್‌ನಲ್ಲಿ ಕಾಣಿಸಿಕೊಳ್ಳಲು ಬಯಸುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕಂಪನಿಯ ಬಗ್ಗೆ ಅಪ್‌ಡೇಟ್ ಮಾಡುವುದು, ಟ್ವೀಟ್ ಮಾಡುವುದು, ಮಾಹಿತಿಯನ್ನು ನೀಡುವುದರ ಮೂಲಕ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. ಬ್ಲಾಗ್ ಮೂಲಕವೇ ಗ್ರಾಹಕರ ಸಮಸ್ಯೆಗಳಿಗೆ ಪರಿಹಾರ ಸೂಚಿಸುವುದು ಕೂಡ ಸಾಧ್ಯವಾಗುತ್ತಿದೆ.

ಈ ಕ್ಷೇತ್ರದಲ್ಲಿನ ಬಹುಬೇಡಿಕೆಯಿಂದಾಗಿ ಸೋಶಿಯಲ್ ಮೀಡಿಯಾ ಮ್ಯಾನೇಜ್‌ಮೆಂಟ್ ಕೋರ್ಸ್‌ಗಳನ್ನು ಹಲವು ಕಾಲೇಜುಗಳು ಆರಂಭಿಸಿವೆ. ಸೋಶಿಯಲ್ ಉದ್ಯಮಿಗಳು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಸೂಚಿಸುವುದರ ಮೂಲಕ ಸಾಮಾಜಿಕ ಸಮತೋಲನ ಸಾಧಿಸಲು ಪ್ರಯತ್ನಿಸುತ್ತಾರೆ. ಇವುಗಳು ಸ್ವತಂತ್ರ ಸಂಸ್ಥೆಗಳಾಗಿರುವುದರಿಂದ ಸಾಮಾಜಿಕ ಉದ್ಯಮಿಗಳು ಲಾಭ-ನಷ್ಟದ ಲೆಕ್ಕಾಚಾರದಲ್ಲಿ ಕಾರ್ಯನಿರ್ವಹಣೆ ಮಾಡುವುದಿಲ್ಲ.

ಈ ಕ್ಷೇತ್ರದಲ್ಲಿ ಕೆಲಸ ಮಾಡಲು ಇಚ್ಛಿಸುವಿರಾದರೆ ಕೆಲವು ಕೌಶಲಗಳನ್ನು ರೂಢಿಸಿಕೊಳ್ಳಿ.

* ಸೋಶಿಯಲ್ ಮೀಡಿಯಾ ಕ್ಷಣಕ್ಷಣ ಅಪ್‌ಡೇಟ್ ಆಗುತ್ತಿರುತ್ತದೆ. ಅದಕ್ಕಾಗಿ ಪ್ರಚಲಿತ ಬದಲಾವಣೆಗಳಿಗೆ ತೆರೆದುಕೊಳ್ಳಬೇಕು.

* ಟಾರ್ಗೆಟ್ ಆಡಿಯೆನ್ಸ್ ತಲುಪಲು ನಿರ್ದಿಷ್ಟ ಜ್ಞಾನ ಗಳಿಸಿಕೊಂಡಿರಲೇಬೇಕು.

* ಪ್ರಾಜೆಕ್ಟ್ ನಿರ್ವಹಣೆ ಹಾಗೂ ಸಾಂಸ್ಥಿಕ ನಿರ್ವಹಣಾ ಕೌಶಲವನ್ನು ಹೊಂದಿರಬೇಕು.

* ಸಾಮಾಜಿಕ ಮಾಧ್ಯಮಗಳ ವೇದಿಕೆಗಳ ಬಗ್ಗೆ ಮಾಹಿತಿ ಹೊಂದಿರುವುದು ಅಗತ್ಯ.

* ಪರಿಣಾಮಕಾರಿ ಸಂವಹನ ಕಲೆ ಹೊಂದಿರಬೇಕು.

* ಟೀಂ ಲೀಡರ್ ಆಗಿ ಕೆಲಸ ಮಾಡುವಂತಹ ಮತ್ತು ಇತರರಿಗೆ ಮಾರ್ಗದರ್ಶನ ಮಾಡುವ ಆತ್ಮವಿಶ್ವಾಸ ಹೊಂದಿರಬೇಕು.

* ತಾಂತ್ರಿಕ ತಿಳಿವಳಿಕೆ ಮತ್ತು ಹೊಸ ಉಪಕರಣಗಳನ್ನು ಬಹುಬೇಗ ತಿಳಿದುಕೊಳ್ಳುವ ಸಾಮರ್ಥ್ಯವಿರಬೇಕು.

* ಪಬ್ಲಿಕ್ ರಿಲೇಷನ್, ಮಾರ್ಕೆಟಿಂಗ್, ಕಮ್ಯುನಿಟಿ ಮ್ಯಾನೇಜ್‌ಮೆಂಟ್ ಎಕ್ಸ್‌ಪೀರಿಯೆನ್ಸ್, ಇವೇ ಮೊದಲಾದ ಕಲೆ ಅಗತ್ಯ.

ಸೋಶಿಯಲ್ ಮೀಡಿಯಾ ಮ್ಯಾನೇಜರ್ ಹುದ್ದೆ ನಿರ್ವಹಿಸುವವರು ಸಂಸ್ಥೆಯಲ್ಲಿ ಕೆಲವು ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ. ಮುಖ್ಯವಾಗಿ,
* ಸಾಮಾಜಿಕ ಮಾಧ್ಯಮ ತಂತ್ರವನ್ನು ಅಳವಡಿಸಿಕೊಳ್ಳುವುದು. ಸ್ಟಾಕ್ ಹೋಲ್ಡರ್ಸ್‌ ಜತೆ ಸಹಕರಿಸುವುದು.

* ಪ್ರಾಡಕ್ಟ್ ಡೆವಲಪ್‌ಮೆಂಟ್ ಟೀಂನೊಂದಿಗೆ ಕೆಲಸ ಮಾಡುವಿರಾದರೆ, ಪ್ರಾಡಕ್ಟ್ ಹಾಗೂ ಸಂಸ್ಥೆಯ ಬಗ್ಗೆ ಮಾಹಿತಿಯನ್ನು ಅಪ್‌ಡೇಟ್ ಮಾಡಬೇಕು.

* ಸಾಮಾಜಿಕ ಮಾಧ್ಯಮ ಪ್ರಚಾರ, ದಿನನಿತ್ಯದ ಚಟುವಟಿಕೆಗಳ ಅಪ್‌ಡೇಟ್ಸ್ ನೀಡುತ್ತಿರಬೇಕು. ಅದಕ್ಕಾಗಿ ಆನ್‌ಲೈನ್ ಸಮರ್ಥನೆ, ಸಂಪಾದಕೀಯ ಬರೆಯುವುದು, ಸಮುದಾಯವನ್ನು ತಲುಪಿಸುವ ಪ್ರಯತ್ನ, ಪ್ರಚಾರ ಕಾರ್ಯಕ್ರಮ ನಿರ್ವಹಣೆ ಇವೇ ಮೊದಲಾದ ಕೆಲಸ ನಿರ್ವಹಿಸಬೇಕಿರುತ್ತದೆ.

* ಸೋಶಿಯಲ್ ನೆಟ್‌ವರ್ಕಿಂಗ್ ಅಂದರೆ ಫೇಸ್ ಬುಕ್, ಟ್ವಿಟ್ಟರ್ ಇಂತಹುದೇ ಇನ್ನೂ ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ ಸಂಸ್ಥೆಯ ಸೇವೆಯನ್ನು ಅಪ್‌ಡೇಟ್ ಮಾಡುವ ಜವಾಬ್ದಾರಿ ನಿರ್ವಹಿಸಬೇಕು.

ಹೆಚ್ಚಿದ ಬೇಡಿಕೆ
ಸೋಶಿಯಲ್ ಮೀಡಿಯಾ ಎಂಬುದೇ ಒಂದು ರೋಚಕ. ಆ ಕ್ಷೇತ್ರದಲ್ಲಿ ಹಲವು ಉದ್ಯೋಗಗಳು ಸೃಷ್ಟಿಯಾಗುತ್ತಿವೆ.
ಡಿಜಿಟಲ್ ಮೀಡಿಯಾ ಮತ್ತು ಎಲೆಕ್ಟ್ರಾನಿಕ್ಸ್ ಜಗತ್ತಿನಲ್ಲಾಗುವ ಬದಲಾವಣೆಯಿಂದಾಗಿ ವ್ಯಾಪಾರ ಉದ್ಯಮದಲ್ಲಿ ಅನೇಕ ಬದಲಾವಣೆಗಳನ್ನು ಕಾಣಬಹುದು. ಅವುಗಳು ಉದ್ಯಮದ ರೇಖೆಯನ್ನು ಬದಲಾಯಿಸಿದೆ ಮತ್ತು ಹೊಸ ಉದ್ಯೋಗಗಳನ್ನು ಸೃಷ್ಟಿ ಮಾಡಿದೆ. ವೃತ್ತಿ ಅನ್ನೋದು ಕೇವಲ ಉದ್ಯೋಗ ಅಲ್ಲ. ಅದು ಜೀವನೋಪಾಯ. ಆಫೀಸ್‌ನಲ್ಲಿ ಕಳೆಯುವ ಅಷ್ಟೂ ಹೊತ್ತು ನಿಮ್ಮ ವೃತ್ತಿ ಮತ್ತು ವೈಯಕ್ತಿಕ ಬದುಕಿನ ಭಾಗವೇ ಆಗಿರುತ್ತದೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ